ಕನ್ನಡದ ಶಾಸ್ತ್ರೀಯ ಕಲರವ  

Share your bol with us! 
The Quint
BOL
Published:
ಗೆಳೆಯರೆ / ಗೆಳತಿಯರೇ,
|
(Photo: Saumya Pankaj/The Quint)
ಗೆಳೆಯರೆ / ಗೆಳತಿಯರೇ,
ADVERTISEMENT

ಗೆಳೆಯರೆ / ಗೆಳತಿಯರೇ,

ಅತ್ಯಂತ ಹೆಮ್ಮೆ ಪಡುವ ವಿಷಯವೇನೆಂದರೆ ನಮ್ಮ ಭಾಷೆ ಕನ್ನಡ, ನಾವು ಕನ್ನಡಿಗರು. ಕನ್ನಡ ಅತ್ಯಂತ ಸುಂದರವಾದ ಭಾಷೆ. ಶ್ರೀ ವಿವೇಕಾನಂದರು ತಮ್ಮ ದೇಶದ ಬಗ್ಗೆ ಅತೀವ ಹೆಮ್ಮೆಯಿಂದ ಹೇಳಿಕೊಂಡಂತೆ, ಕನ್ನಡ ನಮ್ಮ ಭಾಷೆ, ನಮ್ಮ ನಾಡು ಕನ್ನಡ ಇದು ನಮಗೆ ಹೆಮ್ಮೆಯ ವಿಷಯ. ಯಾವುದೇ ಸಂದರ್ಭದಲ್ಲಿ ನಾಡಿನ ಪರಿಚಯ ಮಾಡುವಾಗ ಹೆಮ್ಮೆಯಿಂದ ನಮ್ಮ ನಾಡು, ನುಡಿಗಳ ಬಗ್ಗೆ ಹೇಳಿರಿ.

ಕನ್ನಡಕ್ಕೆ ಭಾರತ ಸರಕಾರದಿಂದ ಈಗ ಶಾಸ್ತ್ರೀಯ ಸ್ಥಾನ-ಮಾನ ದೊರೆತಿದೆ. ಆದರೆ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯೆಂದು ಘೋಷಿಸಲಿ ಬಿಡಲಿ ಅದು ಶಾಸ್ತ್ರೀಯವಾಗಿಯೇ ಇರುವುದು. ಭಾಷೆಯ ಕಟ್ಟುಪಾಡು, ಭಾಷೆಯ ವ್ಯಾಕರಣ, ಭಾಷೆಯ ಹಿಡಿತ, ಹೊಸತನ, ನವಿರತೆ, ಹೊಳಪು ಅನ್ಯ ಭಾಷೆಗಳಿಗೆಲ್ಲಿವೆ? ಕನ್ನಡ ಭಾಷೆಯಲ್ಲಿ ಬೆರೆತಿರುವ ಭಾವಾವಿಷೇಶತೆ ಬೇರೆ ಯಾವ ಭಾಷೆಯಲ್ಲಿಯೂ ಕಾಣುವುದಿಲ್ಲ. ಭಾವನೆಗಳನ್ನು ಅರ್ಥಗರ್ಭಿತವಾಗಿ, ಅತ್ಯಂತ ಸರಳವಾಗಿ, ಸ್ಪಷ್ಠವಾಗಿ ತೋರಿಸಬಲ್ಲ ವಿಷೇಶತೆ ಕನ್ನಡಕ್ಕಿದೆ. ಭಾವನೆಗಳ ಮಿಡಿಯುವ ಭಾಷೆಯಾಗಿದೆ ನಮ್ಮ ಕನ್ನಡ.

ಕನ್ನಡದ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ವಿಕಾಸ್-ಕಾಮತ್ ರವರ ಈ ತಾಣದಲ್ಲಿ ಮುಂದುವರೆಯಿರಿ. ಕನ್ನಡದ ಬಗ್ಗೆ ಇವರು ಬಹಳಷ್ಟು ಮಾಹಿತಿಯನ್ನು ಕಲೆಹಾಕಿದ್ದಾರೆ.

ಕನ್ನಡದ ಕವಿತೆಗಳನ್ನು ಕೇಳಿದಾಗ ಅದರ ಆಳ ಮತ್ತು ವಿಶಾಲತೆಯ ಅನುಭವವಾಗುತ್ತದೆ. ಕನ್ನಡದಲ್ಲಿ ಮಾತ್ರ ಕವಿತೆಗಳನ್ನು ಕಟ್ಟುತ್ತಾರೆ, ಅನ್ಯ ಭಾಷೆಗಳಲ್ಲಿ ಕವಿತೆ/ಕವನಗಳನ್ನು ಬರೆಯುತ್ತಾರೆ. ಗದ್ಯ, ನಾಟಕ, ಕಾದಂಬರಿ ಇವೆಲ್ಲವೂ ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವಲ್ಲಿ ವಿಷೇಶ ಪಾತ್ರವಹಿಸಿವೆ.

(This article was sent to The Quint by Mohammed Sohail for our Independence Day campaign, BOL – Love your Bhasha. Sohail an engineer from Hubli, Karnataka and is currently working in Saudi Arabia.

Love your mother tongue? This Independence Day, tell The Quint why and how you love your bhasha. You may even win a BOL t-shirt! Sing, write, perform, spew poetry – whatever you like – in your mother tongue. Send us your BOL at bol@thequint.com or WhatsApp it to 9910181818.)

(Hi there! We will be continuing our news service on WhatsApp. Also, stay tuned to our Telegram channel here.)

Published: undefined

ADVERTISEMENT
SCROLL FOR NEXT